|
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
Cಕನ್ನಡ
ಸಾಹಿತ್ಯ ಲೋಕದ ದಿಗ್ಗಜರು,
ಸಾಹಿತ್ಯಾಸಕ್ತರು,
ಕನ್ನಡ
ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ,
ಪ್ರಚಲಿತ
ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆ - ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನ. ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ೩
ಅಥವಾ ೪ ದಿನಗಳ ಕಾಲ ಏರ್ಪಾಡಾಗುವ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಠಿಗಳು,
ಕವಿ ಗೋಷ್ಠಿಗಳು,
ಸಂವಾದಗಳು,
ಸಾಂಸ್ಕೃತಿಕ
ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತವೆ.
ಇವು ಕನ್ನಡಿಗರಿಗೆ
ಹೆಚ್ಚು ಪ್ರಯೋಜನಕಾರಿಯಾಗಿವೆ. ಕನ್ನಡದ ಪುಸ್ತಕಗಳು ಅತಿಹೆಚ್ಚಿನ
ಸಂಖ್ಯೆಯಲ್ಲಿ ಮಾರಾಟವಾಗುವ ಏಕೈಕ ಸ್ಥಳ ಕನ್ನಡ ಸಾಹಿತ್ಯ ಸಮ್ಮೇಳನಗಳು. ಅಖಿಲ
ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನಾಡಿನ ಹಿರಿಯ ಸಾಹಿತಿಗಳಿಗೆ
ದೊರೆಯುವ ಅತ್ಯುನ್ನತ ಗೌರವ. ಇದೇ ಮಾದರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ
ಸಮ್ಮೇಳನಗಳು,
ತಾಲ್ಲೂಕು ಹಾಗೂ ಹೋಬಳಿ
ಸಾಹಿತ್ಯ ಸಮ್ಮೇಳನಗಳು ಜರುಗುತ್ತಿವೆ. ಕರ್ನಾಟಕದ ೫ ಗಡಿ ರಾಜ್ಯಗಳಲ್ಲಿ
ಗಡಿನಾಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುವುದು ವಿಶೇಷ ಅಂಶವಾಗಿದೆ.
ಇದಲ್ಲದೆ ಮಕ್ಕಳ ಸಾಹಿತ್ಯ ಸಮಾವೇಶ,
ಜಾನಪದ ಸಮಾವೇಶ,
ಹಾಗೂ ದಲಿತ
ಮತ್ತು ಬಂಡಾಯ ಸಮಾವೇಶಗಳು ಇನ್ನೂ ಮೊದಲಾದ ಸಾಹಿತ್ಯಕ ಸಮಾವೇಶಗಳನ್ನು
ಕಮ್ಮಟಗಳನ್ನು ನಡೆಸಲಾಗುತ್ತಿದೆ. ಈವರೆಗೆ ನಡೆದಿರುವ ಕನ್ನಡ ಸಾಹಿತ್ಯ
ಸಮ್ಮೇಳನಗಳು, ನಡೆದ ಸ್ಥಳ, ವರ್ಷ ಹಾಗೂ ಸಮ್ಮೇಳನಾಧ್ಯಕ್ಷರ ವಿವರ ಇಲ್ಲಿದೆ.
|
ಕ್ರ.ಸಂ. |
ಸಮ್ಮೇಳನದ ಸ್ಥಳ |
ನಡೆದ ವರ್ಷ |
ಸಮ್ಮೇಳನಾಧ್ಯಕ್ಷರು |
|
1 |
ಬೆಂಗಳೂರು |
1915 |
ಎಚ್.ವಿ.ನಂಜುಂಡಯ್ಯ |
|
2 |
ಬೆಂಗಳೂರು |
1916 |
ಎಚ್.ವಿ.ನಂಜುಂಡಯ್ಯ |
|
3 |
ಮೈಸೂರು |
1917 |
ಎಚ್.ವಿ.ನಂಜುಂಡಯ್ಯ |
|
4 |
ಧಾರವಾಡ |
1918 |
ಆರ್.
ನರಸಿಂಹಾಚಾರ್ |
|
5 |
ಹಾಸನ |
1919 |
ಕರ್ಪೂರ
ಶ್ರೀನಿವಾಸರಾವ್ |
|
6 |
ಹೊಸಪೇಟೆ |
1920 |
ರೊದ್ದ
ಶ್ರೀನಿವಾಸರಾವ್ |
|
7 |
ಚಿಕ್ಕಮಗಳೂರು |
1921 |
ಕೆ.ಪಿ.ಪಟ್ಟಣಶೆಟ್ಟಿ |
|
8 |
ದಾವಣಗೆರೆ |
1922 |
ಎಂ.ವೆಂಕಟಕೃಷ್ಣಯ್ಯ |
|
9 |
ಬಿಜಾಪುರ |
1923 |
ಸಿದ್ದಾಂತಿ
ಶಿವಶಂಕರಶಾಸ್ತ್ರಿ |
|
10 |
ಕೋಲಾರ |
1924 |
ಹೊಸಕೋಟೆ
ಕೃಷ್ಣಶಾಸ್ತ್ರೀ |
|
11 |
ಬೆಳಗಾವಿ |
1925 |
ಬೆನಗಲ್
ರಾಮರಾವ್ |
|
12 |
ಬಳ್ಳಾರಿ |
1926 |
ಫ.ಗು.ಹಳಿಕಟ್ಟಿ |
|
13 |
ಮಂಗಳೂರು |
1927 |
ಆರ್. ತಾತಾ |
|
14 |
ಗುಲ್ಬರ್ಗಾ |
1928 |
ಬಿ.ಎಂ.ಶ್ರೀಕಂಠಯ್ಯ |
|
15 |
ಬೆಳಗಾವಿ |
1929 |
ಮಾಸ್ತಿ
ವೆಂಕಟೇಶ ಅಯ್ಯಂಗಾರ್ |
|
16 |
ಮೈಸೂರು |
1930 |
ಆಲೂರು
ವೆಂಕಟರಾವ್ |
|
17 |
ಕಾರವಾರ |
1931 |
ಮಳಲಿ
ತಿಮ್ಮಪ್ಪಯ್ಯ |
|
18 |
ಮಡಿಕೇರಿ |
1932 |
ಡಿ.ವಿ.ಗುಂಡಪ್ಪ |
|
19 |
ಹುಬ್ಬಳ್ಳಿ |
1933 |
ವೈ.ನಾಗೇಶಶಾಸ್ತ್ರೀ |
|
20 |
ರಾಯಚೂರು |
1934 |
ಪಂಜೆ ಮಂಗೇಶರಾಯ |
|
21 |
ಮುಂಬಯಿ |
1935 |
ಎನ್.ಎಸ್.ಸುಬ್ಬರಾವ್ |
|
22 |
ಜಮಖಂಡಿ |
1937 |
ಬೆಳ್ಳಾವೆ
ವೆಂಕಟನಾರಣಪ್ಪ |
|
23 |
ಬಳ್ಳಾರಿ |
1938 |
ರಂ.ರಾ.ದಿವಾಕರ್ |
|
24 |
ಬೆಳಗಾವಿ |
1939 |
ಮುದವೀಡು
ಕೃಷ್ಣರಾವ್ |
|
25 |
ಧಾರವಾಡ |
1940 |
ವೈ.ಚಂದ್ರಶೇಖರ
ಶಾಸ್ತ್ರೀ |
|
26 |
ಹೈದ್ರಾಬಾದ್ |
1941 |
ಎ.ಆರ್.
ಕೃಷ್ಣಶಾಸ್ತ್ರೀ |
|
27 |
ಶಿವಮೊಗ್ಗ |
1943 |
ದ.ರಾ.ಬೇಂದ್ರೆ |
|
28 |
ರಬಕವಿ |
1944 |
ಎಸ್.ಎಸ್.
ಬಸವನಾಳ |
|
29 |
ಮದರಾಸು |
1945 |
ಟಿ.ಪಿ.ಕೈಲಾಸಂ |
|
30 |
ಹರಪನಹಳ್ಳಿ |
1947 |
ಸಿ.ಕೆ.
ವೆಂಕಟರಾಮಯ್ಯ |
|
31 |
ಕಾಸರಗೋಡು |
1948 |
ತಿರುಮಲೆ
ತಾತಾಚಾರ್ಯ ಶರ್ಮಾ |
|
32 |
ಗುಲ್ಬರ್ಗಾ |
1949 |
ಉತ್ತಂಗಿ
ಚೆನ್ನಪ್ಪ |
|
33 |
ಸೊಲ್ಲಾಪುರ |
1950 |
ಎಂ.ಆರ್.ಶ್ರೀನಿವಾಸಮೂರ್ತಿ |
|
34 |
ಮುಂಬಯಿ |
1951 |
ಎಂ.ಗೋವಿಂದಪೈ |
|
35 |
ಬೇಲೂರು |
1952 |
ಎಸ್.ಸಿ.ನಂದಿಮಠ |
|
36 |
ಕುಮಟ |
1954 |
ವಿ.ಸೀತಾರಾಮಯ್ಯ |
|
37 |
ಮೈಸೂರು |
1955 |
ಶಿವರಾಮಕಾರಂತ್ |
|
38 |
ರಾಯಚೂರು |
1955 |
ಆದ್ಯರಂಗಾಚಾರ್ಯ |
|
39 |
ಧಾರವಾಡ |
1957 |
ಕೆ.ವಿ.ಪುಟ್ಟಪ್ಪ |
|
40 |
ಬಳ್ಳಾರಿ |
1958 |
ವಿ.ಕೃ.ಗೋಕಾಕ್ |
|
41 |
ಬೀದರ್ |
1960 |
ಡಿ.ಎಲ್.ನರಸಿಂಹಾಚಾರ್ |
|
42 |
ಮಣಿಪಾಲ |
1960 |
ಅ.ನ.ಕೃಷ್ಣರಾವ್ |
|
43 |
ಗದಗ |
1961 |
ಕೆ.ಜಿ.ಕುಂದಣಗಾರ |
|
44 |
ಸಿದ್ಧಗಂಗಾ |
1963 |
ರಂ.ಶ್ರೀ.ಮುಗಳಿ |
|
45 |
ಕಾರವಾರ |
1965 |
ಕಡೆಂಗೋಡ್ಲು
ಶಂಕರಭಟ್ಟ |
|
46 |
ಶ್ರವಣಬೆಳಗೊಳ |
1967 |
ಅ.ನೇ.ಉಪಾಧ್ಯೆ |
|
47 |
ಬೆಂಗಳೂರು |
1970 |
ದೇ.ಜವರೇಗೌಡ |
|
48 |
ಮಂಡ್ಯ |
1974 |
ಜಯದೇವಿ ತಾಯಿ
ಲಿಗಾಡೆ |
|
49 |
ಶಿವಮೊಗ್ಗ |
1976 |
ಎಸ್.ವಿ.ರಂಗಣ್ಣ |
|
50 |
ನವದೆಹಲಿ |
1978 |
ಜಿ.ಪಿ.ರಾಜರತ್ನಂ |
|
51 |
ಧರ್ಮಸ್ಥಳ |
1979 |
ಎಂ.ಗೋಪಾಲಕೃಷ್ಣ
ಅಡಿಗ |
|
52 |
ಬೆಳಗಾವಿ |
1980 |
ಬಸವರಾಜ
ಕಟ್ಟಿಮನೀ |
|
53 |
ಚಿಕ್ಕಮಗಳೂರು |
1981 |
ಪು.ತಿ.ನರಸಿಂಹಾಚಾರ್ |
|
54 |
ಮಡಿಕೇರಿ |
1981 |
ಶಂಬಾ ಜೋಶಿ |
|
55 |
ಶಿರಸಿ |
1982 |
ಗೊರೂರು
ರಾಮಸ್ವಾಮಿ ಅಯ್ಯಂಗಾರ್ |
|
56 |
ಕೈವಾರ |
1984 |
ಎ.ಎನ್.
ಮೂರ್ತಿರಾವ್ |
|
57 |
ಬೀದರ್ |
1985 |
ಹಾ.ಮಾ.ನಾಯಕ್ |
|
58 |
ಕಲಬುರ್ಗಿ |
1987 |
ಸಿದ್ದಯ್ಯ
ಪುರಾಣಿಕ್ |
|
59 |
ಹುಬ್ಬಳ್ಳಿ |
1990 |
ಆರ್.ಸಿ.
ಹಿರೇಮಠ್ |
|
60 |
ಮೈಸೂರು |
1990 |
ಕೆ.ಎಸ್.
ನರಸಿಂಹಸ್ವಾಮಿ |
|
61 |
ದಾವಣಗೆರೆ |
1992 |
ಜಿ.ಎಸ್.
ಶಿವರುದ್ರಪ್ಪ |
|
62 |
ಕೊಪ್ಪಳ |
1992 |
ಸಿಂಪಿ ಲಿಂಗಣ್ಣ |
|
63 |
ಮಂಡ್ಯ |
1994 |
ಚದುರಂಗ |
|
64 |
ಮುಧೋಳ |
1995 |
ಎಚ್.ಎಲ್.
ನಾಗೇಗೌಡ |
|
65 |
ಹಾಸನ |
1996 |
ಚನ್ನವೀರಕಣವಿ |
|
66 |
ಮಂಗಳೂರು |
1997 |
ಕಯ್ಯಾರ ಕಿಞಣ್ಣ
ರೈ |
|
67 |
ಕನಕಪುರ |
1999 |
ಡಾ.ಎಸ್.ಎಲ್.
ಬೈರಪ್ಪ |
|
68 |
ಬಾಗಲಕೋಟೆ |
2000 |
ಶಾಂತಾದೇವಿ
ಮಾಳವಾಡ |
|
69 |
ತುಮಕೂರು |
2002 |
ಯು.ಆರ್.
ಅನಂತಮೂರ್ತಿ |
|
70 |
ಬೆಳಗಾವಿ |
2003 |
ಡಾ.ಪಾಟೀಲ
ಪುಟ್ಟಪ್ಪ |
|
71 |
ಮೂಡಬಿದಿರೆ |
2004 |
ಡಾ.ಕಮಲಾ ಹಂಪನಾ |
|
72 |
ಬೀದರ್ |
2006 |
ಶಾಂತರಸ
ಹೆಂಬೇರಾಳು |
|
73 |
ಶಿವಮೊಗ್ಗ |
2006 |
ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ |
|
74 |
ಉಡುಪಿ |
2007 |
ಎಲ್.ಎಸ್.ಶೇಷಗಿರಿರಾವ್ |
|
75 |
ಚಿತ್ರದುರ್ಗ |
2009 |
ಡಾ.ಎಲ್.ಬಸವರಾಜು
ಅವರ ಅಧ್ಯಕ್ಷೀಯ ಭಾಷಣ |
|
76 |
ಗದಗ
ಸಮ್ಮೇಳನ ವರದಿ |
2010 |
ಡಾ.ಗೀತಾ
ನಾಗಭೂಷಣ
ಅವರ ಅಧ್ಯಕ್ಷೀಯ ಭಾಷಣ |
|
77 |
ಬೆಂಗಳೂರು
ಸಮ್ಮೇಳನದ ವರದಿ |
2011 |
ಪ್ರೊ. ಜಿ. ವೆಂಕಟಸುಬ್ಬಯ್ಯ
ಅವರ ಅಧ್ಯಕ್ಷೀಯ
ಭಾಷಣ |
ಮುಖಪುಟ |