|
ವರುಷ ತುಂಬಿತು ಹರುಷ ತಂದಿತು
*ಪ್ರೊ.ಎನ್.ಚಂದ್ರಪ್ಪ
ಸಮಸ್ತ ಕನ್ನಡಿಗರ
ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ೯೫ ವರ್ಷಗಳ ಸುದೀರ್ಘ
ಇತಿಹಾಸವಿದೆ. ಕನ್ನಡದ ಅತಿರಥ ಮಹಾರಥರು ಈ ಸಂಸ್ಥೆಯನ್ನು ಕಟ್ಟಿ
ಬೆಳೆಸಿದ್ದಾರೆ. ಕನ್ನಡಿಗರಿಗೆ ಕೋಡು ಮೂಡಿಸಿರುವ ಪರಿಷತ್ತಿನ ೨೩ನೆಯ
ಅಧ್ಯಕ್ಷರಾಗಿ
ಆಯ್ಕೆಯಾಗಿರುವ ಡಾ. ನಲ್ಲೂರು ಪ್ರಸಾದ್ ಅವರು,
ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಕಾರ್ಯಗತಗೊಳಿಸಿ, ನುಡಿದಂತೆ
ನಡೆದು
ಆದರ್ಶಪ್ರಾಯರಾಗಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಚುನಾಯಿತರಾಗುವ ಸಂದರ್ಭದಲ್ಲಿ
ನೀಡಿದ್ದ ಬಹುತೇಕ ಆಶ್ವಾಸನೆಗಳನ್ನು ಈಡೇರಿಸಿರುವುದು ಅವರ ಕಾರ್ಯ ವೈಖರಿಗೆ,
ನಂಬಿರುವ
ಮೌಲ್ಯಕ್ಕೆ ಸಾಕ್ಷಿಗಾಗಿದೆ. ಒಂದು ವರ್ಷದಲ್ಲಿ ಅಧ್ಯಕ್ಷರು ಮಾಡಿರುವ ಕಾರ್ಯಗಳ
ಸಂಕ್ಷಿಪ್ತ ನೋಟವನ್ನು ಮಾನ್ಯ ಸದಸ್ಯ ಕನ್ನಡ ಬಂಧುಗಳ ಅವಗಾಹನೆಗಾಗಿ
ನೀಡಲಾಗಿದೆ :-
೧.
ಪರಿಷತ್ತಿನ ಆರ್ಥಿಕ ಸ್ಥಿತಿ ಸುಧಾರಿಸಲು
ದಿಟ್ಟಕ್ರಮ : ಕಳೆದ ಕೆಲವು ದಶಕಗಳಿಂದ ಪರಿಷತ್ತಿನ ಒಡನಾಟವನ್ನು
ಇಟ್ಟುಕೊಂಡು,
ವಿವಿಧ ಸ್ಥಾನಗಳಲ್ಲಿ
ಕಾರ್ಯ ನಿರ್ವಹಿಸಿದ್ದ ಡಾ. ನಲ್ಲೂರು ಅವರಿಗೆ ಈ ಮಹಾನ್ ಸಂಸ್ಥೆಯ ಹಣಕಾಸಿನ
ಸ್ಥಿತಿಯನ್ನು ಸುಧಾರಿಸಬೇಕೆಂಬ ದೃಢ ಮನಸ್ಸಾಗಿ ತಾವು ಅಧಿಕಾರ ವಹಿಸಿಕೊಂಡ
ತರುಣದಲ್ಲೇ ‘ಕನ್ನಡ
ನಿಧಿ’ಯನ್ನು
ಸ್ಥಾಪಿಸಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಮುಂದಾಗಿ ಇದುವರೆಗೆ ಆ
ನಿಧಿಗೆ ಸುಮಾರು ೧೦ ಲಕ್ಷ ರೂಪಾಯಿ ಗಳನ್ನು ಸೇರಿಸಲಾಗಿದೆ. ಸರ್ಕಾರದೊಡನೆ
ಮಧುರ ಬಾಂಧವ್ಯವನ್ನು ಇಟ್ಟುಕೊಂಡ ಪರಿಣಾಮವಾಗಿ ಜಿಲ್ಲಾ ಸಮ್ಮೇಳನಗಳಿಗೆ ತಲಾ ೫
ಲಕ್ಷ,
ತಾಲ್ಲೂಕು ಸಮ್ಮೇಳನಗಳಿಗೆ
ತಲಾ ಒಂದು ಲಕ್ಷ,
ಸಂಶೋಧನಾ ಕೇಂದ್ರಕ್ಕೆ
ಒಂದು ಕೋಟಿ,
ನಿಘಂಟು ಯೋಜನೆಗೆ ಒಂದು
ಕೋಟಿ,
ಸಿಬ್ಬಂದಿ ಸಂಬಳಾನುದಾನ
ಹೆಚ್ಚುವರಿ ೨೬ಲಕ್ಷ
ರೂಪಾಯಿಗಳನ್ನು ಸರ್ಕಾರದಿಂದ ಪಡೆದಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.
೨. ‘ಕನ್ನಡ
ನುಡಿ’
ಪತ್ರಿಕೆ ಮೇಲ್ದರ್ಜೆಗೆ :
ಸದಸ್ಯರಿಂದ ಸದಾ ಟೀಕೆಗೆ ಗುರಿಯಾಗುತ್ತಿದ್ದ ಪರಿಷತ್ತಿನ ಮುಖವಾಣಿ ‘ಕನ್ನಡ
ನುಡಿ’
ಪತ್ರಿಕೆಗೆ ಉತ್ಸಾಹಿ
ಕೋ.ವೆಂ.ರಾಮಕೃಷ್ಣೇಗೌಡ ಅವರನ್ನು ಸಂಪಾದಕರನ್ನಾಗಿ ನೇಮಿಸಿ,
ಪತ್ರಿಕೆ
ನಿಗದಿತವಾಗಿ,
ಸುಂದರವಾಗಿ,
ಮಾಹಿತಿಪೂರ್ಣವಾಗಿ,
ಸಂಗ್ರಹಯೋಗ್ಯವಾಗಿ
ಬರುವಂತೆ ಮಾಡಿದ್ದು ಡಾ. ನಲ್ಲೂರು ಪ್ರಸಾದ್ ಅವರ ದೊಡ್ಡ ಸಾಧನೆ.
ನಾಡಿನಾದ್ಯಂತ ಇರುವ ಸದಸ್ಯರು ಮುಕ್ತ ಕಂಠದಿಂದ ಹೊಗಳುವ ಮಟ್ಟಕ್ಕೆ
ಪತ್ರಿಕೆಯನ್ನು ಬೆಳೆಸಿದ್ದಾರೆ.
೩.
ಸದಸ್ಯತ್ವದಲ್ಲಿ ಗಣನೀಯ ಏರಿಕೆ : ಕಳೆದ
ವರ್ಷ ಪರಿಷತ್ತಿನ ಸದಸ್ಯರ ಸಂಖ್ಯೆ ಸುಮಾರು ೬೫ ಸಾವಿರವಿತ್ತು. ಈಗ ಆ ಸಂಖ್ಯೆ
೧ ಲಕ್ಷ ೨೦ ಸಾವಿರ ಮುಟ್ಟಿರುವುದು ಪರಿಷತ್ತು ಜನಮುಖಿ ಸಂಸ್ಥೆಯಾಗಿ
ರೂಪುಗೊಳ್ಳುತ್ತಿರುವುದರ ದ್ಯೋತಕವಾಗಿದೆ. ಹಿಂದೆ ಯಾವ ವರ್ಷವೂ ಈ ಪ್ರಮಾಣದ
ಸದಸ್ಯರ ನೋಂದಣಿಯಾಗಿರಲಿಲ್ಲ.
೪.
ಹೊಸ ಯೋಜನೆಗಳ ಜಾರಿ : ಸಮಗ್ರ
ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು ವಲಯ ಸಮಾವೇಶಗಳು ಅನುಷ್ಠಾನಗೊಂಡಿವೆ.
ಗುಲ್ಬರ್ಗಾದಲ್ಲಿ ಜಾನಪದ ಸಮಾವೇಶ,
ಹಾಸನದಲ್ಲಿ
ಮಕ್ಕಳ ಸಾಹಿತ್ಯ ಸಮಾವೇಶ,
ಧಾರವಾಡದಲ್ಲಿ
ಯುವ ಸಾಹಿತ್ಯ ಸಮಾವೇಶ,
ರಾಮನಗರದಲ್ಲಿ
ಮಹಿಳಾ ಸಾಹಿತ್ಯ ಸಮಾವೇಶಗಳು ಯಶಸ್ವಿಯಾಗಿ ನಡೆದಿವೆ. ಇದೇ ಬಗೆಯಲ್ಲಿ
ಬೆಂಗಳೂರಿನಲ್ಲಿ ಸಿನಿಮಾ ಸಾಹಿತ್ಯ ಸಮಾವೇಶ,
ಶ್ರವಣಬೆಳಗೊಳದಲ್ಲಿ ಪ್ರಾಚ್ಯ ಸಾಹಿತ್ಯ ಸಮಾವೇಶ,
ಉಡುಪಿಯಲ್ಲಿ ದಾಸ
ಸಾಹಿತ್ಯ ಸಮಾವೇಶ,
ಮೈಸೂರಿನಲ್ಲಿ ಆಧುನಿಕ
ಸಾಹಿತ್ಯ ಸಮಾವೇಶಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಸ್ಥಳೀಯ
ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ‘ಗ್ರಾಮಸಿರಿ’
ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
೫. ನಿಘಂಟು ಯೋಜನೆ :
ಹಳೆಯ ನಿಘಂಟುಗಳ ಮುರುಮುದ್ರಣದ ಜೊತೆಗೆ ಶಾಲಾ ಮಕ್ಕಳಿಗಾಗಿ ಸಚಿತ್ರ ನಿಘಂಟು,
ಪ್ರಾದೇಶಿಕ
ಸಮತೋಲನ ನೀಡುವ ನಿಘಂಟು,
ಆಡಳಿತಾತ್ಮಕ
ನಿಘಂಟುಗಳ ಮುದ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
೬. ಸಂಶೋಧನಾ ಕೇಂದ್ರ :
ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಎಂ.ಫಿಲ್.,
ಪಿಎಚ್.ಡಿ.
ನೀಡಿಕೆಗಾಗಿ ಸಮರ್ಥವಾಗಿ ಸಂಶೋಧನಾ ಕೇಂದ್ರವನ್ನು ಕಟ್ಟುವ ಎಲ್ಲಾ ಸಿದ್ಧತೆಗಳು
ಪೂರ್ಣಗೊಂಡಿದ್ದು,
ಅಧಿಕೃತವಾಗಿ ಇಷ್ಟರಲ್ಲೇ
ಉದ್ಘಾಟನೆಗೊಳ್ಳಲಿದೆ.
೭. ಪಾರದರ್ಶಕ ಆಡಳಿತಕ್ಕೆ
ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು,
ಜಿಲ್ಲಾ
ಘಟಕಗಳಲ್ಲೂ ಅದು ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಲಾಗಿದೆ.
೮. ಸಿಬ್ಬಂದಿಯ ಹಿತ
ಕಾಯುವ ಉದ್ದೇಶದಿಂದ ಬಹುದಿನಗಳ ಬೇಡಿಕೆಯಾಗಿದ್ದ ಬಡ್ತಿಯನ್ನು ನೀಡಲಾಗಿದೆ.
ದಿನಗೂಲಿ ನೌಕರರ ವೇತನವನ್ನೂ ಹೆಚ್ಚಿಸಲಾಗಿದೆ.
೯. ಕನ್ನಡದ ಹಿತ ಕಾಯುವ
ಉದ್ದೇಶದಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡಬೇಕೆಂದು ಬೀದಿ ಚಳುವಳಿಗೆ
ಮುಂದಾಗಿದ್ದ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದ್ದನ್ನು
ಸ್ಮರಿಸಬಹುದು. ಸರ್ಕಾರ ಸಂಸ್ಕೃತ ವಿ.ವಿ. ಸ್ಥಾಪಿಸುವುದನ್ನು ಕೈಬಿಡಬೇಕೆಂದು
ನಾಡಿನ ಗಣ್ಯರ ಚಿಂತನ ಸಭೆಯನ್ನು ಕರೆದು ಪರಿಷತ್ತಿನ ಅಭಿಪ್ರಾಯವನ್ನು
ಪ್ರಕಟಿಸಿದ್ದು ದಾಖಲಾರ್ಹ ಅಂಶವಾಗಿದೆ.
೧೦. ‘ಕುವೆಂಪು
ಸಭಾಂಗಣ’ವನ್ನು
ಅಸ್ತಿತ್ವಕ್ಕೆ ತರುವ ಮೂಲಕ ಪರಿಷತ್ತಿಗೆ ಆದಾಯ ಬರುವಂತೆ ಮಾಡಿರುವುದಲ್ಲದೆ
ಸಂಘ ಸಂಸ್ಥೆಗಳಿಗೂ ಅನುಕೂಲವಾಗುವಂತೆ ರೂಪಿಸಲಾಗಿದೆ.
೧೧. ಕನ್ನಡ ಸಾಹಿತ್ಯ
ಪರಿಷತ್ತಿನ ಪ್ರಕಟಣೆಗಳನ್ನು ಆಧುನಿಕವಾಗಿಸಿ,
ಆಕರ್ಷಕ ಮುಖಪುಟ
ಹಾಗೂ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿರುವುದು ಪುಸ್ತಕ ಪ್ರೇಮಿಗಳ
ಮೆಚ್ಚುಗೆಗೆ ಪಾತ್ರವಾಗಿದೆ. ನೂರಾರು ಪುಸ್ತಕಗಳ ಪ್ರಕಟಣೆಯ ಹಿನ್ನೆಲೆಯಲ್ಲಿ
ಕಾರ್ಯಯೋಜನೆಯನ್ನು ಸಿದ್ಧಗೊಳಿಸಲಾಗುತ್ತಿದೆ.
ಈ ಎಲ್ಲಾ ಕಾರ್ಯಗಳನ್ನು
ಮಾಡುವಲ್ಲಿ ಪರಿಷತ್ತಿನ ಸಿಬ್ಬಂದಿಗಳು,
ಜಿಲ್ಲಾ,
ತಾಲ್ಲೂಕು ಘಟಕಗಳ,
ಕನ್ನಡದ
ಪರಿಶುದ್ಧ ಮನಸ್ಸುಗಳ ಸಹಕಾರ ಅತ್ಯಮೂಲ್ಯವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ
ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಡಾ. ಬಿ.ಎಸ್.ಯಡಿಯೂರಪ್ಪ,
ಸಂಸ್ಕೃತಿ
ಇಲಾಖೆಯ ಕಾರ್ಯದರ್ಶಿಗಳಾದ ಬಿ.ಆರ್.ಜಯರಾಜರಾಜೇ ಅರಸ್,
ನಿರ್ದೇಶಕರಾದ
ಮನು ಬಳಿಗಾರ್ ಅವರ ಸಕಾರಾತ್ಮಕ ಸ್ಪಂದನೆಗಳು ಅತಿ ಮುಖ್ಯವಾಗಿವೆ..
|