|
ಪರಿಷತ್ತಿನ ಪದಾಧಿಕಾರಿಗಳು
ಶ್ರೀ
ಎಚ್.ಕೆ.ಮಳಲೀಗೌಡ-ಗೌರವ ಕಾರ್ಯದರ್ಶಿ
ಶ್ರೀ ಎಚ್.ಕೆ.ಮಳಲೀಗೌಡ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ
ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ
ಎಪಿಎಸ್ ಪದವಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿರುವ
ಶ್ರೀಯುತರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕನ್ನಡಮ್ಮನ
ಸೇವೆಗೆ ಕಂಕಣಬದ್ಧರಾಗಿದ್ದಾರೆ. ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್
ಅವರೊಂದಿಗೆ ಕ್ರಿಯಾಶೀಲರಾಗಿ ಅನೇಕ ಜನಪರ,
ಕನ್ನಡಪರ
ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಳಲೀಗೌಡ ಅವರ ಸಾಹಿತ್ಯ,
ಸಾಂಸ್ಕೃತಿಕವಾಗಿ
ತಮ್ಮದೇ ಛಾಪು ಮೂಡಿಸಿದ್ದಾರೆ.
ಹಾಸನದ ಜಿಲ್ಲೆಯ
ಹಳ್ಳಿಯೊಂದರಿಂದ ಬೆಂಗಳೂರಿನಲ್ಲಿ ನೆಲೆಸಿರುವ ಮಳಲೀಗೌಡ ಅವರು ಗೂಡು ಕಟ್ಟಬೇಕು
ಹಾಗೂ ಇನ್ನಿತರ ಅನೇಕ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಶ್ರೀ
ಸಂಗಮೇಶ ಬಾದವಾಡಗಿ- ಗೌರವ ಕಾರ್ಯದರ್ಶಿ
ಕೊಪ್ಪಳ ಜಿಲ್ಲೆಯ
ಕುಷ್ಟಗಿ ತಾಲೂಕು ಜುಮಲಾಪುರ ಎಂಬ ಗ್ರಾಮದಲ್ಲಿ ಜನಿಸಿದ ಸಂಗಮೇಶ್
ಬಾದವಾಡಗಿ ಅವರು ಶಿಕ್ಷಣ ಹಾಗೂ ಆಹಾರ ಮತ್ತು
ನಾಗರಿಕ ಸರಬರಾಜು ಇಲಾಖೆಯಲ್ಲಿ
ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದು,
ನಂತರ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಶೇಷಾಧಿಕಾರಿಯಾಗಿ ಸೇವೆ
ಸಲ್ಲಿಸಿ ಸ್ವಯಂ ನಿವೃತ್ತಿ
ಪಡೆದಿರುತ್ತಾರೆ. ಕರ್ತವ್ಯದಲ್ಲಿ ದಕ್ಷತೆ, ಪ್ರಾಮಾಣಿಕತೆ ಮತ್ತು
ಉತ್ಸಾಹಕ್ಕೆ ಹೆಸರಾಗಿದ್ದ ಅವರು, ಪ್ರಸ್ತುತ ಪರಿಷತ್ತಿನ
ಗೌರವ ಕಾರ್ಯದರ್ಶಿಯಾಗಿ ಕನ್ನಡ
ಚಟುವಟಿಕೆಗಳಲ್ಲೂ ಅದೇ ಬಗೆಯ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ.
ಅವರು ಕವನ, ಕಥೆ, ಪ್ರವಾಸ ಕಥನ,
ಚುಟುಕ, ಪ್ರಬಂಧ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ 8 ಗ್ರಂಥಗಳನ್ನು
ಪ್ರಕಟಿಸಿದ್ದಾರೆ. ಅನೇಕ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ.
ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ
ಅವರು, ಬೆಂಗಳೂರಿನಲ್ಲಿರುವ ಹೈದ್ರಾಬಾದ್ ಕರ್ನಾಟಕ
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷರಾಗಿಯೂ ಸೇವೆ
ಸಲ್ಲಿಸುತ್ತಿದ್ದಾರೆ. ರಾಜ್ಯೋತ್ಸವ
ಸನ್ಮಾನ, ಗೊರೂರು ಪ್ರತಿಷ್ಠಾನದ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ
ಪುರಸ್ಕಾರಗಳು ಇವರಿಗೆ ಸಂದಿವೆ.
ಶ್ರೀ
ಪುಂಡಲೀಕ ಹಾಲಂಬಿ- ಗೌರವ ಕೋಶಾಧ್ಯಕ್ಷರು
ಕನ್ನಡ ಸಾಹಿತ್ಯ
ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿ ಮರುನೇಮಕಗೊಂಡಿರುವ ಪುಂಡಲೀಕ ಹಾಲಂಬಿ
ಅವರು ಪರಿಷತ್ತಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಸತತವಾಗಿ
ಪರಿಷತ್ತಿನ ಜೊತೆ ನಿಕಟ ಸಂಬಂಧ ಹೊಂದಿರುವ ಇವರು ಎರಡು ಅವಧಿಗೆ ಗೌರವ
ಕಾರ್ಯದರ್ಶಿಯಾಗಿ ಹಾಗೂ ಒಂದು ಅವಧಿಗೆ ಗೌರವ ಕೋಶಾದ್ಯಕ್ಷರಾಗಿ ಕಾರ್ಯ
ನಿರ್ವಹಿಸಿದ್ದಾರೆ. ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು
ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ
ಪ್ರಸಾರಾಂಗ ಸಂಯೋಜನಾಧಿಕಾರಿಯಾಗಿ ಮೂವತ್ತಮೂರು ವರ್ಷಗಳಿಂದ ಸೇವೆ
ಸಲ್ಲಿಸುತ್ತಿರುವ ಇವರು ಹೋಟೆಲ್ ಉದ್ದಿಮೆದಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ
ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾರ್ಯಕಾರಿ
ಸಮಿತಿ ಸದಸ್ಯರು
ಡಾ.ವಿಜಯಶ್ರಿ
ಸಬರದ-ಮಹಿಳಾ ಪ್ರತಿನಿಧಿ
ಕೇಂದ್ರ ಕನ್ನಡ ಸಾಹಿತ್ಯ
ಪರಿಷತ್ತಿನ ಕಾರ್ಯಕಾರಿ ಸಮಿತಿಯ ಮಹಿಳಾ ಪ್ರತಿನಿಧಿಯಾಗಿ ಬೀದರ್ ಜಿಲ್ಲೆಯವರಾದ
ಡಾ.ವಿಜಯಶ್ರಿ ಸಬರದ ನೇಮಕಗೊಂಡಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ
ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು ಹಾಗೂ ಕನ್ನಡ ಅಧ್ಯಯನ ವಿಭಾಗದ
ಮುಖ್ಯಸ್ಥರಾಗಿ ಸೇವೆ ಸಲ್ಲಿರುತ್ತಿರುವ ಇವರು ಸಾಹಿತ್ಯ ಕೃಷಿಯಲ್ಲಿ
ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಕಾವ್ಯ,
ನಾಟಕ,
ವಿಮರ್ಶೆ,
ಮಹಿಳಾಸಂವೇದನೆಯ
ವಿವಿಧ ಮಜಲುಗಳು ಸೇರಿದಂತೆ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು
ಪ್ರಕಟಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಪ್ರಶಸ್ತಿ,
ರಾಜ್ಯೋತ್ಸವ
ಪ್ರಶಸ್ತಿ,
ಅತ್ತಿಮಬ್ಬೆ ಪ್ರಶಸ್ತಿ
ಸೇರಿದಂತೆ ಹತ್ತು ಹಲವು ಗೌರವಗಳಿಗೆ ಪಾತ್ರವಾಗಿರುವ ಡಾ.ವಿಜಯಶ್ರೀ ಸಬರದ
ಸಾಹಿತ್ಯ ಪರಿಷತ್ತನ್ನು ಮತ್ತಷ್ಟು ಸದೃಢಗೊಳಿಸಲು ಕ್ರಿಯಾಶೀಲರಾಗಿದ್ದಾರೆ.
ಪ್ರೊ.ಎನ್.ಚಂದ್ರಪ್ಪ-ಪರಿಶಿಷ್ಟ
ಪ್ರತಿನಿಧಿ
ಸಾಹಿತ್ಯ,
ಸಾಮಾಜಿಕ ಹಾಗೂ
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ
ಪ್ರೊ.ಎನ್.ಚಂದ್ರಪ್ಪ ಪರಿಶಿಷ್ಟ ವರ್ಗದ ಪ್ರತಿನಿಧಿಯಾಗಿ ಪರಿಷತ್ತಿಗೆ
ನೇಮಕಗೊಂಡಿದ್ದಾರೆ. ನಾಡು,
ನುಡಿಯ
ಬೆಳವಣಿಗೆಯಲ್ಲಿ ಹಲವು ರೀತಿಯಲ್ಲಿ ಶ್ರಮಿಸಿರುವ ಚಂದ್ರಪ್ಪ ಅವರು
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿಯವರು. ಇವರು
ಬೆಂಗಳೂರಿನ ಪ್ರತಿಷ್ಠಿತ ವಿಶ್ವೇಶ್ವರಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ
ಸೇವೆ ಸಲ್ಲಿಸುತ್ತಿದ್ದಾರೆ.
ಬುಡಕಟ್ಟು ಜನರ ಸಾಮಾಜಿಕ,
ಸಾಂಸ್ಕೃತಿಕ
ಬದುಕನ್ನು ಕನ್ನಡಿಗರಿಗೆ ಸಾಹಿತ್ಯದ ಮೂಲಕ ಪರಿಚಯಿಸುವ ಪಾತ್ರವನ್ನು
ಚಂದ್ರಪ್ಪನವರು ಮಾಡಿದ್ದಾರೆ. ಇವರ ಸೇವೆ ಇದೀಗ ಪರಿಷತ್ತಿಗೆ ಲಭ್ಯವಾಗಿದೆ.
ಶ್ರೀ
ಬಿ.ಎಚ್.ಸತೀಶ್‌ಗೌಡ- ಸಂಘ ಸಂಸ್ಥೆಗಳ ಪ್ರತಿನಿಧಿ
ಯುವಕರಾಗಿದ್ದರೂ ಸದಾ ಕಾಲ
ಕನ್ನಡದ ಕೈಂಕರ್ಯಕ್ಕೆ ಎದೆಯೊಡ್ಡಿ ನಿಲ್ಲುವ ಸಂಘ ಸಂಸ್ಥೆಗಳಲ್ಲಿ ಒಂದಾದ
ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಘಟಕದ ಖಜಾಂಚಿಯಾಗಿರುವ ಶ್ರೀ
ಬಿ.ಎಚ್.ಸತೀಶ್‌ಗೌಡ
ಪರಿಷತ್ತಿಗೆ ಸಂಘ
ಸಂಸ್ಥೆಗಳ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.
ತುಮಕೂರು ಜಿಲ್ಲೆ
ಕುಣಿಗಲ್ ತಾಲೂಕಿನ ಎಡೆಯೂರಿನವರಾದ ಸತೀಶ್‌ಗೌಡ ರಂಗ ಕಲಾವಿದರೊಡನೆ ನಿಕಟ
ಸಂಪರ್ಕವನ್ನು ಹೊಂದಿ ಇದೀಗ ಹೊನ್ನಾದೇವಿ ಕ್ರಿಯೇಷನ್ಸ್ ಎಂಬ ಸಂಸ್ಥೆಯೊಂದನ್ನು
ಹುಟ್ಟುಹಾಕಿದ್ದಾರೆ. ಅನೇಕ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಗಮನ
ಸೆಳೆದಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಗೆ
ನೇಮಕಗೊಳ್ಳುವ ಮೂಲಕ ಮತ್ತಷ್ಟು ಕ್ರಿಯಾಶೀಲರಾಗಿದ್ದಾರೆ.
ಕನ್ನಡನುಡಿ ಸಂಪಾದಕರು
ಶ್ರೀ
ಕೋ.ವೆಂ.ರಾಮಕೃಷ್ಣೇಗೌಡ
ಕನ್ನಡಪರ ಹೋರಾಟಗಳಲ್ಲಿ
ಕಳೆದ ಇಪ್ಪತ್ತೆಂಟು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ
ಕೋ.ವೆಂ.ರಾಮಕೃಷ್ನೇಗೌಡ ಅವರು ಪರಿಷತ್ ಪ್ರಕಟಿಸುತ್ತಿರುವ ‘ಕನ್ನಡ
ನುಡಿ’ಯ
ಸಂಪಾದಕರು. ಕವಿ,
ವಿಮರ್ಶಕ ಹಾಗೂ
ಸಂಶೋಧಕರಾಗಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಇತ್ಯ ಪರಿಷತ್ತಿನ
ಅಧ್ಯಕ್ಷರಾಗಿ ಉತ್ತಮ ಸಂಘಟನಾ ಚಾತುರ್ಯ ಹೊಂದಿರುವ ಶ್ರೀಯುತರು ಪರಿಷತ್ತಿನ
‘ಕನ್ನಡ ನುಡಿ’ಗೆ
ಹೊಸ ರೂಪ ನೀಡಿದ್ದಾರೆ.
ಇಪ್ಪತ್ತಕ್ಕೂ ಹೆಚ್ಚು
ಕೃತಿಗಳನ್ನು ಸಂಪಾದಿಸಿರುವ ರಾಮಕೃಷ್ಣೇಗೌಡರು ಆಕಾಶವಾಣಿ ಮತ್ತು
ದೂರದರ್ಶನಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರಿನ ಸಂತ ಜೋಸೆಫರ
ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ
ಸಲ್ಲಿಸುತ್ತಿದ್ದಾರೆ.
|