|
ಪರಿಷತ್ತಿನ ಮುಖವಾಣಿ ಕನ್ನಡನುಡಿ
ಯಾವುದೇ
ವ್ಯಕ್ತಿಯಾಗಲಿ ಅಥವಾ ಸಂಸ್ಥೆಯಾಗಲಿ ತನ್ನ ಕಾರ್ಯಚಟುವಟಿಕೆಗಳು ಮತ್ತೊಬ್ಬರಿಗೆ
ತಲುಪುವಂತೆ ಮಾಡಲು ಪ್ರಸಾರ ಮಾಧ್ಯಮ ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ ಕೆಲವು
ಸಂಘ ಸಂಸ್ಥೆಗಳು- ವ್ಯಕ್ತಿಗಳು ತಮ್ಮ ಪರಿಚಯಗಳುಳ್ಳ ಮುಖವಾಣಿ ಪತ್ರಿಕೆಗಳನ್ನು
ಪ್ರಾರಂಭಿಸುವುದು ವಾಡಿಕೆ.
ಇದೇ ರೀತಿ ಕನ್ನಡ
ಸಾಹಿತ್ಯ ಪರಿಷತ್ತು ಸಹ ೧೯೩೮ನೇ ಅಕ್ಟೋಬರ್ ೪ರಂದು ವಿಜಯದಶಮಿ ದಿನದಂದು
‘ಕನ್ನಡ ನುಡಿ’
ವಾರಪತ್ರಿಕೆಯನ್ನು ಆರಂಭಿಸಿತು. ಇದರ ರೂವಾರಿಗಳಾದವರು ಅಂದಿನ ಕ.ಸಾ.ಪ.
ಉಪಾಧ್ಯಕ್ಷರಾಗಿದ್ದ
ಶ್ರೀಯುತ
ಡಿ.ವಿ.ಗುಂಡಪ್ಪನವರು.
ಇದನ್ನು
ವಿಸ್ತೃತಗೊಳಿಸಿದವರು ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರು.
ಕನ್ನಡ ನುಡಿ
ವಾರಪತ್ರಿಕೆಯ ಪ್ರಥಮ ಸಂಪಾದಕರಾಗಿ ಶ್ರೀ ಅ.ನ.ಕೃಷ್ಣರಾಯರು ಕಾರ್ಯ
ನಿರ್ವಹಿಸಿದರು. ಈ ಪತ್ರಿಕೆ ಫುಲ್‌ಸ್ಕೇಪ್ ಆಕಾರದಲ್ಲಿ ಎಂಟು
ಪುಟಗಳಾಗಿದ್ದು
ಇದರ ಮುಖಬೆಲೆ ಆರು ಕಾಸುಗಳಾಗಿತ್ತು. ವಾರ್ಷಿಕ ಚಂದಾ ಒಂದೂವರೆ
ರೂಪಾಯಿಗಳಾಗಿತ್ತು.
ಆರಂಭದಲ್ಲಿಯೂ ಆರ್ಥಿಕ
ಹೊಡೆತ ಪರಿಷತ್ತನ್ನು ಬಿಟ್ಟಿರಲಿಲ್ಲ. ಇದರಿಂದಾಗಿ ಪರಿಷತ್ಪತ್ರಿಕೆ
೧೯೪೯ರಲ್ಲಿ ಕೆಲಕಾಲ ಪಾಕ್ಷಿಕ ಪತ್ರಿಕೆಯಾಗಿ ಮಾರ್ಪಾಡಾಯಿತು. ಆನಂತರ ೧೯೫೦ನೇ
ಆಗಸ್ಟ್ ತಿಂಗಳಿಂದ ಮಾಸಿಕವಾಗಿ ಪತ್ರಿಕೆಯಾಗಿ ಪ್ರಕಟವಾಗತೊಡಗಿತು. ಮತ್ತೊಮ್ಮೆ
೧೯೬೯ರಿಂದ ಪುನ: ಪಾಕ್ಷಿಕ ಪತ್ರಿಕೆಯಾಗಿ ‘ಕನ್ನಡ
ನುಡಿ’
ಸದಸ್ಯರ ಕೈ
ಸೇರುತ್ತಿತ್ತು.
ಮತ್ತೆ ಕೆಲವು ವರ್ಷಗಳಿಂದ
ಮಾಸಪತ್ರಿಕೆಯಾಗಿ ಪ್ರಕಟಗೊಂಡಿತು. ಪರಿಷತ್ ಆಧುನೀಕರಣಗೊಂಡ ನಂತರ ‘ಕನ್ನಡ
ನುಡಿ’
ಯೂ
ಸಹ
ಸಿಂಗಾರಗೊಂಡು
ಹೊಸ
ರೂಪ ಪಡೆಯಿತು.
ಇದೀಗ ಡಾ. ನಲ್ಲೂರು ಪ್ರಸಾದ್ ಅಧ್ಯಕ್ಷರಾದ ನಂತರ ಪರಿಷತ್ಪತ್ರಿಕೆಯನ್ನು
ಒಂದು
ಸಂಗ್ರಹಯೋಗ್ಯ ಸಂಚಿಕೆಯನ್ನಾಗಿ ಮಾಡಬೇಕೆಂಬ ಅಚಲ ನಿರ್ಧಾರ ತೆಗೆದುಕೊಂಡ
ಪರಿಣಾಮ
‘ಕನ್ನಡ
ನುಡಿ’ಗೆ ಹೊಸ
ವಿನ್ಯಾಸ ಮತ್ತು ಬಣ್ಣದ ಮುದ್ರಣ ಕಾಣುವಂತಾಗಿದೆ. ಈಗ ಕೋ.ವೆಂ. ರಾಮಕೃಷ್ಣೇಗೌಡ
ಸಂಪಾದಕತ್ವದಲ್ಲಿ ಕನ್ನಡ ನುಡಿ ಪತ್ರಿಕೆ ಹೊಸತನದೊಂದಿಗೆ ಪ್ರಕಟವಾಗುತ್ತಿದೆ.
|