ಸಾಹಿತ್ಯ ಪರೀಕ್ಷೆಗಳು

೧೯೪೦ನೇ ಇಸವಿಯಿಂದ ಪ್ರಾರಂಭವಾಗಿರುವ ಸಾಹಿತ್ಯ ಪರೀಕ್ಷೆಗಳು ಪರಿಷತ್ತಿನ ಜನಪ್ರಿಯ ಕಾರ್ಯ ಚಟುವಟಿಕೆಗಳಲ್ಲಿ ಒಂದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ತಿಳುವಳಿಕೆ ನೀಡುವ ಕನ್ನಡ ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುವುದರ ಜೊತೆಗೆ ಹೊಸದಾಗಿ ಕನ್ನಡ ಕಲಿಯುವ ಆಸಕ್ತರಿಗಾಗಿ ಕನ್ನಡ ಪ್ರವೇಶವೆಂಬ ಪರೀಕ್ಷೆಯನ್ನು ಏರ್ಪಡಿಸುತ್ತಿದೆ. ಪರೀಕ್ಷೆಗಳು ಸರ್ಕಾರದಿಂದ ಅಂಗೀಕಾರ ಪಡೆದಿರುತ್ತವೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಸಾಹಿತ್ಯ ಪರೀಕ್ಷೆಗಳ ಪ್ರಯೋಜನ ಪಡೆದಿದ್ದಾರೆ.

ಶಾಸನ ಶಾಸ್ತ್ರ ಡಿಪ್ಲೋಮಾ ಮತ್ತು ಜಾನಪದ ಡಿಪ್ಲೋಮಾ ಕೋರ್ಸುಗಳು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿವೆ. ಇವು ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿವೆ.

website hosted by kar.nic.in
Designged and Maintained by kannadaratna.com