ದತ್ತಿನಿಧಿ

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ನೀಡಲು ಹಾಗೂ ಕಾರ್ಯಕ್ರಮ ಗಳನ್ನು ನಡೆಸಲು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲು ಅನೇಕ ಸಾಹಿತ್ಯಾಭಿಮಾನಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ. ಈ ಮೂಲನಿಧಿಯನ್ನು ಶಾಶ್ವತ ಠೇವಣಿಯಾಗಿಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ದಾನಿಗಳ ಅಪೇಕ್ಷೆಯಂತೆ ನಡೆಸಿಕೊಂಡು ಬರಲಾಗುತ್ತಿದೆ. ಈಗ ಇಂತಹ ೮೫೦ ದತ್ತಿನಿಧಿಗಳಿವೆ. ಉಪನ್ಯಾಸ, ಸಾಹಿತ್ಯಕ ಸ್ಪರ್ಧೆ, ಗ್ರಂಥಭಂಡಾರಕ್ಕೆ ಪುಸ್ತಕ ಖರೀದಿ, ಪುಸ್ತಕ ಪ್ರಕಟಣೆ, ಬಹುಮಾನ, ಪ್ರಶಸ್ತಿ ನೀಡಿಕೆ ಇತ್ಯಾದಿ ಆಶಯಗಳನ್ನು ತಿಳಿಸಿದ ದತ್ತಿನಿಧಿಗಳಿವೆ. ಚಾವುಂಡರಾಯ ಪ್ರಶಸ್ತಿ, ಬಿ. ಸರೋಜಾದೇವಿ ಪ್ರಶಸ್ತಿ, ಹಾ.ಮಾ.ನಾ ಪ್ರಶಸ್ತಿ, ಭಾರತೀಸುತ ಪ್ರಶಸ್ತಿ ಇತ್ಯಾದಿ ಸಾಹಿತ್ಯಕ ಪ್ರಶಸ್ತಿಗಳನ್ನು ಪ್ರತಿವರ್ಷ ಆಯ್ದ ಹಿರಿಯ ನೆರವಾಗುತ್ತದೆ.

website hosted by kar.nic.in
Designged and Maintained by kannadaratna.com